ರಾಯಚೂರು: ಚಿಕ್ಕಸುಗೂರು ಜಲಶುದ್ಧೀಕರಣ ಘಟಕ ಸ್ವಚ್ಛಗೊಳಿಸಿದ ಎಇಇ
ನಗರಕ್ಕೆ ಶೇಕಡ 25ರಷ್ಟು ಕುಡಿಯುವ ನೀರು ಸರಬರಾಜು ಮಾಡುವ ಚಿಕ್ಕಸೂಗೂರು ಜಲಶುದ್ಧೀಕರಣ ಘಟಕಕ್ಕೆ ಮಹಾನಗರ ಪಾಲಿಕೆಯ ಕುಡಿಯುವ ನೀರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಹೇಶ್ ಕುಮಾರ್ ಅವರು ಸೆ.16 ರ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಜಲಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದರು. ಸಿಬ್ಬಂದಿಗಳ ಸಹಾಯದಿಂದ ಜಲ ಶುದ್ಧೀಕರಣ ಘಟಕವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಯಿತು. ಕೃಷ್ಣಾನದಿಯಿಂದ ಚಿಕ್ಕಸುಗೂರು ಜಲಶುದ್ಧೀಕರಣ ಘಟಕಕ್ಕೆ ಪೈಪ್ಲೈನ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತದೆ. ಹೀಗಾಗಿ ಜಲಶುದ್ಧೀಕರಣ ಘಟಕವನ್ನು ಶುದ್ಧೀಕರಿಸಲಾಯಿತು.