ಕಲಬುರಗಿ : ಕಲಬುರಗಿ ನಗರ ಹೊರವಲಯದ ನಂದಿಕೂರ ಗ್ರಾಮದಲ್ಲಿ ಜೂಜುಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರೋ ಘಟನೆ ನಡೆದಿದ್ದು, ಡಿ3 ರಂದು ಬೆಳಗ್ಗೆ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಖಚಿತ ಮಾಹಿತಿ ಮೆರೆಗೆ ಫರಹತ್ತಬಾದ್ ಠಾಣೆ ಇನ್ಸ್ಪೆಕ್ಟರ್ ಬಾಷಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.. ದಾಳಿ ಸಂದರ್ಭದಲ್ಲಿ ಜೂಜಾಡುತ್ತಿದ್ದ ಸಂತೋಷ್, ಯಲ್ಲಾಲಿಂಗ, ರಮೇಶ, ಈರಣ್ಣ, ಶರಣಬಸಪ್ಪ, ಸಿದ್ದಪ್ಪ, ನಾಗರಾಜ, ಬಸವರಾಜ್ ಸೇರಿದಂತೆ ಒಂಬತ್ತು ಜನ ಜೂಜುಕೋರರನ್ನ ಬಂಧಿಸಲಾಗಿದೆ.. ಬಂಧಿತರಿಂದ ₹17380 ಹಣ ಜಪ್ತಿ ಮಾಡಲಾಗಿದೆ..