ತುಮಕೂರು: ಮತ್ತೆ ಹೇಮಾವತಿ ಲಿಂಕ್ ಕೆನಾಲ್ ಹೋರಾಟ, ನನಗೆ ಮಾಹಿತಿ ಇಲ್ಲ ನಗರದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ. ಸೋಮಣ್ಣ ಬುಧವಾರ ಸಂಜೆ 5 ಗಂಟೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಈ ಯೋಜನೆ ನನ್ನ ಕಾಲದಲ್ಲಿ ಪ್ರಾರಂಭವಾಗಿಲ್ಲ, ನನಗೆ ಮಾಹಿತಿ ಇಲ್ಲ. ಆದರೆ ಯಾವುದೇ ಜನರಿಗೆ ಅನಾನುಕೂಲ ಅಥವಾ ಅನ್ಯಾಯವಾಗಬಾರದು ಎಂದು ಈಗಾಗಲೇ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮತ್ತೊಮ್ಮೆ ಚರ್ಚಿಸುತ್ತೇನೆ. ಯಾರಿಗೂ ಅನ್ಯಾಯ ಆಗದಂತೆ ನೀರಿನ ಹಂಚಿಕೆ ಮಾಡಬೇಕು” ಎಂದು ಅವರು ಹೇಳಿ ಮಾತು ಮುಂದುವರಿಸಿದರು...