ಕಲಬುರಗಿ : ಡಿಸೆಂಬರ್ 5 ಮತ್ತು 6 ರಂದು ಎರಡು ದಿನಗಳ ಕಾಲ ಕಲಬುರಗಿ ನಗರದ ಮಾಧವನಗರ ಬಡಾವಣೆಯಲ್ಲಿನ ಇಂಚಗೇರ ಶಾಖಾ ಮಠದಲ್ಲಿ 52 ನೇಯ ಆಧ್ಯಾತ್ಮ ಸಪ್ತಾಹ ಹಾಗೂ ಶ್ರೀ ಸದ್ಗುರು ಜಗನ್ನಾಥ ಮಹಾರಾಜರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಏರ್ಪಡಿಸಲಾಗಿದೆಯೆಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ದಿಗಂಬರ್ ಬೆಳಮಗಿ ಹೇಳಿದ್ದಾರೆ.. ಡಿ2 ರಂದು ಮಧ್ಯಾನ 12.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶರು, ಗುರು ಹಿರಿಯರು, ರಾಜಕೀಯ ಗಣ್ಯರು ಸೇರಿದಂತೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಭಾಗಿಯಾಗ್ತಿದ್ದಾರೆಂದು ದಿಗಂಬರ್ ಬೆಳಮಗಿ ಹೇಳಿದ್ದಾರೆ