ಜೋಯಿಡಾ : ತಾಲೂಕಿನ ಸಿಂಗರಗಾವ್ ಮಾರ್ಗದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಟ್ರಕ್ ಚಾಲಕ ಗಂಟೆಗಟ್ಟಲೇ ವಾಹನದಲ್ಲೇ ಸಿಲುಕಿಕೊಂಡ ಘಟನೆ ಜೋಯಿಡಾ-ಜಗಲಬೇಟ್ನಿಂದ ದಾಂಡೇಲಿಗೆ ಸಂಪರ್ಕಿಸುವ ಸಿಂಗರಗಾವ್ ರಸ್ತೆ ಮಾರ್ಗದಲ್ಲಿ ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ. ಅಪಘಾತಕ್ಕೆ ಒಳಗಾದ ಟ್ರಕ್ ಗೋವಾದಿಂದ ದಾಂಡೇಲಿಗೆ ಬರುತಿದ್ದ ವೇಳೆ ಎದುರಿನಿಂದ ಬಂದ ವಾಹನವನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕ ಶಾಹಿದ್ ನಾಯಕವಾಡಿ (24) ಗಂಭೀರವಾಗಿ ಗಾಯಗೊಂಡಿದ್ದು, ಟ್ರಕ್ ಒಳಗೆ ಸಿಲುಕಿಕೊಂಡಿದ್ದನು.