ಬೇಲೂರು: ಹಾಡ್ಲಿಗೆರೆ ಗ್ರಾಮದಲ್ಲಿ ಜಮೀನು ಉಳುಮೆ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
Belur, Hassan | Sep 17, 2025 ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಹಾಡ್ಲಿಗೆರೆ ಗ್ರಾಮದ ಚಂದ್ರೇಗೌಡ ಎಂಬುವವರು ಸರ್ವೆ ನಂಬರ್ 55 ರಲ್ಲಿ ಸರ್ಕಾರಿ ಗೋಮಾಳದ ಜಾಗವನ್ನು ಸುಮಾರು 50 ವರ್ಷಗಳಿಂದ ಒಂದೂವರೆ ಎಕರೆ ಜಮೀನನ್ನು ಉಳಿಮೆ ಮಾಡಿಕೊಂಡು ಬರುತ್ತಿದ್ದು ಇದೇ ಗ್ರಾಮದ ಜಯಲಕ್ಷ್ಮಿ ರೇವಣ್ಣಗೌಡ ಎಂಬುವವರು 4 ಎಕರೆ ಸರ್ಕಾರಿ ಜಾಗವನ್ನು ಅವರು ಸಹ ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದರೂ ಸಹ ವಿನಾಕಾರಣ ಸುಮ್ಮನೆ ನಾವು ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕೆಲಸ ಮಾಡಲು ಬಿಡದೆ ತುಂಬಾ ತೊಂದರೆ ಕೊಡುವುದಲ್ಲದೆ ಇತ್ತೀಚೆಗೆ ನಾನು ಕೆಲಸ ಮಾಡುವ ಸಂದರ್ಭ ಏಕಾಎಕಿ ಬಂದು ನನ್ನ ಮೇಲೆ ಹಲ್ಲೆ ನಡೆಸಿ ರೇವಣ್ಣಗೌಡ ಹಾಗು ಜಯಲಕ್ಷ್ಮಿ ಎಂಬುವವರು ಮಾರಕಾಸ್ತ್ರಗಳಿಂದ ಹೊಡೆಡಿದ್ದಾರೆ