ಜಮೀನಿನಲ್ಲಿ ಅಗ್ನಿ ಅವಘಡ ಉಂಟಾಗಿ ಮುಸುಕಿನ ಜೋಳ ಹಾಗೂ ತೆಂಗು, ಕೃಷಿ ಪರಿಕರ ಸುಟ್ಟು ಭಸ್ಮವಾದ ಘಟನೆ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಜ್ಯೋತಿಗೌಡನಪುರ ಗ್ರಾಮದ ಸರ್ವೇ ನಂ 132/2 ರ ಸುಂದರಯ್ಯ ಎಂಬುವವರ ಜಮೀನಿನಲ್ಲಿ ಕಟಾವು ಮಾಡಿದ್ದ ಮುಸುಕಿನ ಜೋಳದ ರಾಶಿಗೆ ಬೆಂಕಿ ತಗುಲಿ ಬೆಳೆ ಭಸ್ಮವಾಗಿದೆ. ಜೊತೆಗೆ, ತೆಂಗು ಮತ್ತು ಕೃಷಿ ಪರಿಕರಗಳೂ ಸುಟ್ಟು ಕರಕಲಾಗಿದೆ. ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸರು ಭೇಟಿ ಕೊಟ್ಟಿದ್ದಾರೆ.