ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ವಕೀಲರ ದಿನದ ಪ್ರಯುಕ್ತ ವಿಶೇಷ ಗೌರವ ಸಮಾರಂಭ ಜರುಗಿತು. ವಕೀಲಿಕೆ ವೃತ್ತಿಯಲ್ಲಿ 50 ವರ್ಷಗಳ ಅರ್ಧಶತಮಾನ ಸೇವೆಯನ್ನು ಪೂರ್ಣಗೊಳಿಸಿದ ಸಂಸ್ಥೆಯ ಕುಟುಂಬ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಕಾನೂನು ವೃತ್ತಿಗೆ ಅರ್ಪಿಸಿದ ಸೇವೆಯನ್ನು ಶ್ಲಾಘಿಸಿ ಸನ್ಮಾನಿತರಿಗೆ ಗೌರವ ಫಲಕ ಹಾಗೂ ಶಾಲು ಪ್ರದಾನ ಮಾಡಿ ಸೇವಾ ಗೌರವ ಸಲ್ಲಿಸಲಾಯಿತು ಎಂದು ಸಂಸ್ಥೆ ಗುರುವಾರ 6 ಗಂಟೆಗೆ ಮಾಹಿತಿ ನೀಡಿದೆ...