ಬೆಂಗಳೂರು ಉತ್ತರ: ಮಗುವಿನ ಮೇಲೆ ಹರಿದ ಕಾರು, ಬೆಚ್ಚಿ ಬೀಳಿಸುತ್ತೆ ಸಿಸಿಟಿವಿ ದೃಶ್ಯ
ಟಿಬಿ ಸ್ಟಾಪ್ ಬಳಿಯ ಸುಭಾಷ್ ನಗರದಲ್ಲಿ 28ರಂದು, ಮನೆಯ ಬಳಿ ರಸ್ತೆ ಮೇಲೆ ಆಟವಾಡುತ್ತಿದ್ದ 3 ವರ್ಷದ ದಕ್ಷಿತ್ ಎಂಬ ಮಗುವಿನ ಮೇಲೆ ಕಾರು ಹರಿದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಮಗು ತಲೆ, ಮುಖ, ಬೆನ್ನಿಗೆ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಚಾಲಕನ ಬೇಜವಾಬ್ದಾರಿಯಿಂದಾಗಿ ಈ ದುರ್ಘಟನೆ ನಡೆದಿದೆ, ಆದರೆ ಮಗು ಪವಾಡ ಸದೃಶ್ಯವಾಗಿ ಸಾವಿನಿಂದ ಪಾರಾಗಿದೆ.