ಹುಣಸಗಿ: ಮಾರನಾಳ ತಾಂಡದಿಂದ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ನೂರಾರು ಜನರ ಪಾದಯಾತ್ರೆ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾರನಾಳ ತಾಂಡಾ ದಿಂದ ಘತ್ತರಗಿಯ ಭಾಗ್ಯವಂತಿ ದೇವಸ್ಥಾನಕ್ಕೆ ನೂರಾರು ಜನರಿಂದ ಪಾದಯಾತ್ರೆ ಆರಂಭಿಸಲಾಗಿದೆ. ಬುಧವಾರ ಬೆಳಗ್ಗೆ ತಾಂಡಾದಲ್ಲಿರುವ ಭಾಗ್ಯವಂತಿಯ ಪೂಜಾ ಸ್ಥಳದಿಂದ ಸೇರಿದ್ದ ಎಲ್ಲ ಭಕ್ತರು ಮೊದಲು ಪೂಜೆಯನ್ನು ಸಲ್ಲಿಸಿ ನಂತರ ಗ್ರಾಮದ ಹೊರ ವಲಯದಿಂದ ಪಾದಯಾತ್ರೆ ಆರಂಭದ ಅಂಗವಾಗಿ ಎಲ್ಲರೂ ಘೋಷಣೆಗಳನ್ನು ಕೂಗಿ ಪಾದಯಾತ್ರೆ ಆರಂಭಿಸಿದರು. ಈ ಸಂದರ್ಭದಲ್ಲಿ ತಾಂಡಾದ ಭಾಗ್ಯವಂತಿ ದೇವಸ್ಥಾನದ ಪೂಜಾರಿ ಸೇರಿದಂತೆ ಅನೇಕ ಮುಖಂಡರು ನೂರಾರು ಜನರು ಭಾಗವಹಿಸಿದ್ದರು.