ಹೊನ್ನಾವರ: ಪಟ್ಟಣದಲ್ಲಿ ಅ.29ರಂದು ವಿದ್ಯುತ್ ವ್ಯತ್ಯಯ:ಹೆಸ್ಕಾಂ ಕಚೇರಿ ಮಾಹಿತಿ
ಸೋಮವಾರ ಸಂಜೆ 7ಕ್ಕೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ ಹೊನ್ನಾವರ ಹೆಸ್ಕಾಂ ಕಚೇರಿಯು ಹೊನ್ನಾವರ 110 ಕೆ.ವಿ ವಿದ್ಯುತ್ ವಿತರಣಾ ಉಪ-ಕೇಂದ್ರದ 10 ಎಮ್.ವಿ.ಎ ವಿದ್ಯುತ್ ವಿತರಣಾ ಕೇಂದ್ರದ ತುರ್ತು ನಿರ್ವಹಣಾ ಕೆಲಸದ ನಿಮ್ಮಿತ್ತ ಹೊನ್ನಾವರ ತಾಲೂಕಿನ ಪಟ್ಟಣ ಶಾಖೆ ಬಂದರುರೋಡ, ಕೆ.ಹೆಚ್.ಬಿ. ಕಾಲೋನಿ, ಎಲ್.ಐ.ಸಿ ಮತ್ತು ಕರ್ಕಿ ಫೀಡರ್ಗಳ ವ್ಯಾಪ್ತಿಗಳಲ್ಲಿ ಹಾಗೂ 33 ಕೆ.ವಿ ವಿದ್ಯುತ್ ವಿತರಣಾ ಉಪ-ಕೇಂದ್ರದ ಗೇರುಸೊಪ್ಪ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕೆಲಸದ ನಿಮ್ಮಿತ್ತ ಮಾಗೋಡ,ಉಪ್ಪೋಣಿ, ರೈಟ್, ಲೆಫ್ಟ್ ಹಾಗೂ ಕಾಲೋನಿ ಫೀಡರ್ ವ್ಯಾಪ್ತಿಯಲ್ಲಿ ಅ.29 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ