ಗುಂಡ್ಲುಪೇಟೆ: ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯ
ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಪಟ್ಟಣದ ಹೊರವಲಯದ ಹಿಂದೂಸ್ತಾನ್ ಇಟ್ಟಿಗೆ ಫ್ಯಾಕ್ಟರಿ ಬಳಿ ಬುಧವಾರ ನಡೆದಿದೆ. ತಮಿಳುನಾಡಿನ ಗೂಡ್ಲೂರು ತಾಲೂಕಿನ ಧರ್ಮಗಿರಿ ಗ್ರಾಮದ ಫೈಜಲ್ ಮೃತ ಯುವಕ. ಗೂಡ್ಲೂರು ತಾಲೂಕಿನ ಸುಮೇಶ್, ಮಣಿವಣ್ಣನ್ ಹಾಗೂ ರಘುರಾಮನ್ ಕೊಲೆ ಮಾಡಿರುವ ಆರೋಪಿಗಳು. ಇವರೆಲ್ಲರೂ ಸ್ನೇಹಿತರಾಗಿದ್ದು ಮಂಗಳವಾರದಂದು ಗುಂಡ್ಲುಪೇಟೆಗೆ ಬಂದು ಇಟ್ಟಿಗೆ ಪ್ಯಾಕ್ಟರಿ ಬಳಿಯ ಮನೆಯೊಂದರಲ್ಲಿ ತಂಗಿದ್ದರು. ಮೂವರು ಸ್ನೇಹಿತರ ನಡುವೆ ಗಲಾಟೆಯಾಗಿ ಮಣಿವಣ್ಣನ್ ಎಂಬಾತ ಲಾಂಗ್ ನಿಂದ ಫೈಜಲ್ ಗೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಫೈಜಲ್ ನನ್ನು ಮೂವರು ಸ್ನೇಹಿತರು ಆಸ್ಪತ್ರೆಗೆ ಕರೆತಂದರಾದರೂ ಅಷ್ಟರಲ್ಲಾಗಲೇ ಪೈಜಲ್ ಅಸುನೀಗಿದ್ದಾನೆ.