ಕಲಬುರಗಿ : ನಿಧಿ ಆಸೆಗಾಗಿ ಕಿಡಗೇಡಿಗಳು ನಂದಿ (ಬಸವೇಶ್ವರ) ಮೂರ್ತಿ ಧ್ವಂಸ ಮಾಡಿರೋ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಇಂದ್ರಪಾಡ್ ಹೊಸಳ್ಳಿ ಗ್ರಾಮದಲ್ಲಿ ನಡೆದಿದ್ದು, ನ25 ರಂದು ಬೆಳಗ್ಗೆ 9 ಗಂಟೆಗೆ ಬೆಳಕಿಗೆ ಬಂದಿದೆ.. ತಡರಾತ್ರಿ ಊರಲ್ಲಿರೋ ನಂದಿ ವಿಗ್ರಹಗಳ ಪೈಕಿ ಒಂದನ್ನ ಜೆಸಿಬಿಯಿಂದ ಧ್ವಂಸ ಮಾಡಿ ನಿಧಿಗಾಗಿ ಅಗೆಯಲಾಗಿದೆ.. ಇನ್ನೂ ಕಿಡಿಗೇಡಿಗಳ ಬಂಧನಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದು, ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ