ಹೊನ್ನಾವರ: ವಿದ್ಯುತ್ ಲೈನ್ ಹರಿದು ಮೃತ ಪಟ್ಟಿದ್ದ ಕುಟುಂಬಕ್ಕೆ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ನೆರವು
ಹೊನ್ನಾವರ ತಾಲೂಕಿನ ಕಾಸರಕೋಡ ಪಂಚಾಯತ ಬಟ್ಟೆ ವಿನಾಯಕಕೇರಿಯಲ್ಲಿ ಮನೆಯ ಬಳಿಯಿಂದ ಹಾದು ಹೋಗಿದ್ದ ವಿದ್ಯುತ್ ಲೈನ್ ಹರಿದು ಬಿದ್ದ ಪರಿಣಾಮ ಸಂತೋಷ ಗೌಡ ಎನ್ನುವವರು ಮೃತಪಟ್ಟಿಟ್ಟು ಅವರ ಕುಟುಂಬಕ್ಕೆ ಗುರುವಾರ ಸಂಜೆ 5ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು, ಅಪಘಾತದಲ್ಲಿ ಮೃತ ಪಟ್ಟ ಕುಟುಂಬದವರಿಗೆ ಸರಕಾರದಿಂದ 10 ಲಕ್ಷ ರೂ. ಪರಿಹಾರದ ಚೆಕ್ ನ್ನು ಹಸ್ತಾಂತರಿಸಿ, ಮಕ್ಳಳ ವಿದ್ಯಾಭ್ಯಾಸಕ್ಕಾಗಿ ವಯಕ್ತಿಕ ರೂ.5 ಲಕ್ಷ ರೂ. ಸಹಾಯ ನೀಡುವುದರ ಜೊತೆಗೆ ಮಕ್ಕಳಿಗೆ ಉದ್ಯೋಗ ನೀಡುವ ಭರವಸೆ ನೀಡಿದರು.