ಕಲಬುರಗಿ : ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ 2023 ರಿಂದ ಇದುವರೆಗೆ 675838 ರೈತರಿಗೆ 10 ಕೋಟಿ 68 ಲಕ್ಷ ಬೆಳೆ ಪರಿಹಾರ ನೀಡಲಾಗಿದೆ.. ಆದರೂ ಸಹ ನಮ್ಮ ಸರ್ಕಾರ ಯಾವುದೇ ಪರಿಹಾರ ನೀಡ್ತಿಲ್ಲವೆಂದು ಪ್ರಚಾರಕ್ಕಾಗಿ ಬಿಜೆಪಿ ಅ್ರಚಾರ ಮಾಡ್ತಿದೆ ಅಂತಾ ಕಾಂಗ್ರೆಸ್ ಮುಖಂಡ ಶಿವಾನಂದ ಪಾಟೀಲ್ ಮರತೂರ್ ಕಿಡಿಕಾರಿದ್ದಾರೆ.. ಡಿ5 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆರವರ ಸತತ ಪ್ರಯತ್ನದಿಂದ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಪರಿಹಾರ ಬಿಡುಗಡೆಯಾಗಿದೆ.. ಆದರೆ ಕೇಂದ್ರ ಸರ್ಕಾರದಿಂದ ನಯಾ ಪೈಸೆ ಪರಿಹಾರ ಬಿಡುಗಡೆ ಆಗಿಲ್ಲವೆಂದು ಶಿವಾನಂದ ಪಾಟೀಲ್ ಮರತೂರ್ ಆಕ್ರೋಶ ವ್ಯಕ್ತಪಡಿಸಿದರು