ಟನೆಲ್ ರಸ್ತೆ ಯೋಜನೆಗೆ ಅಶೋಕ್ ನೇತೃತ್ವದಲ್ಲಿ ಸಮಿತಿ ಮಾಡೋಣ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 3:30 ರ ಸುಮಾರಿಗೆ ಪದ್ಮನಾಭನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಡಿಕೆಶಿ ಸಮಿತಿ ಮಾಡಲಿ, ನಾನು ಸಮಿತಿಗೆ ಅಧ್ಯಕ್ಷ ಆಗಲು ಒಪ್ಕೋತೇನೆ. ಆದರೆ ಮೊದಲು ರಸ್ತೆ ಗುಂಡಿ ಮುಚ್ಚಲಿ, ಕಸ ಸಮಸ್ಯೆ ಬಗೆಹರಿಸಲಿ, ನಂತರ ನನಗೆ ಆಹ್ವಾನ ಕೊಡಲಿ. ನಿಮ್ಮ ಬಳಿ ಟನೆಲ್ ರೋಡ್ ಮಾಡೋದಿಕ್ಕೇ ಹಣ ಇಲ್ಲ. ಇನ್ನು ಸಮಿತಿ ಮಾಡಿ ಹಣ ಯಾಕೆ ಪೋಲು ಮಾಡ್ತೀರಿ? ಟನೆಲ್ ರಸ್ತೆ ಬಗ್ಗೆ ಸರಿಯಾದ ಚರ್ಚೆ ಆಗಿಲ್ಲ, ಬೆಂಗಳೂರು ಜನರ ಅಭಿಪ್ರಾಯ ಪಡೆದಿಲ್ಲ ಎಂದು ಕಿಡಿಕಾರಿದರು.