ಬೆಂಗಳೂರು ಉತ್ತರ: ಕೆಂಪು ಕೋಟಿ ಬಳಿ ಕಾರು ಸ್ಪೋಟ; ನಾವು ದೇಶದ ಪರವಾಗಿ ನಿಲ್ಲುತ್ತೇವೆ: ನಗರದಲ್ಲಿ ಎಂ.ಬಿ ಪಾಟೀಲ್
ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸದಾಶಿವನಗರದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ ಬಿ ಪಾಟೀಲ್ ಅವರು, ದೆಹಲಿ ಬ್ಲಾಸ್ಟ್ ಗೆ ಬಿಹಾರ ಚುನಾವಣೆಗೆ ನಾವು ತಳಕು ಹಾಕುವಂತದ್ದಲ್ಲ. ದೆಹಲಿಯಲ್ಲಿ ಏನು ಘಟನೆಯಾಗಿದೆ ಅದು ಉಗ್ರಗಾಮಿಗಳ ಕೈವಾಡನ ಅಥವಾ ಕೆಮಿಕಲ್ ಬ್ಲಾಸ್ಟ್ ಆಗಿದೆಯಾ ಎಂಬುದು ಸ್ಪಷ್ಟಗೊಳ್ಳಬೇಕಿದೆ. ಒಂದು ವೇಳೆ ಉಗ್ರರ ಕೃತ್ಯ ಆಗಿದ್ದರೆ, ಅದನ್ನ ಎಲ್ಲರೂ ಖಂಡನೆ ಮಾಡಬೇಕು. ಇಂಥ ವಿಚಾರದಲ್ಲಿ ನಾವೆಲ್ಲ ದೇಶದ ಪರವಾಗಿ ಜನರ ಪರವಾಗಿ ಒಗ್ಗಟ್ಟಾಗಿದ್ದೇವೆ. ಕೆಂಪು ಕೋಟೆ ಬಳಿ ಆಗುವಂಥದ್ದು ಇದು ಭದ್ರತಾ ವೈಫಲ್ಯ ಆಗುತ್ತೆ.ನಾವು ಈಗ ವಿಷಯವನ್ನು ಎತ್ತಲು ಬಯಸುವುದಿಲ್ಲ, ಇದು ಉಗ್ರರ ಕೈವಾಡನ ಅಥವಾ ಕೆಮಿಕಲ್ ಆಗಿದ್ಯ ತಿಳಿದುಕೊಳ್ಳಬೇಕು