ಬೆಂಗಳೂರು ಪೂರ್ವ: ರಸ್ತೆ ಗುಂಡಿ ಬಿದ್ದಿದ್ದಕ್ಕೆ ಜನ ಮಾಡಿದ್ದೇನು ಗೊತ್ತಾ?! ಪಣತ್ತೂರು ಜನರ ಕಟ್ಟೆ ಒಡೆದ ಆಕ್ರೋಶ
ಪಣತ್ತೂರು ಭಾಗದಲ್ಲಿ ಜನ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸೆಪ್ಟೆಂಬರ್ 8 ಸಂಜೆ 6 ಗಂಟೆಗೆ ಪ್ರೊಟೆಸ್ಟ್ ಮಾಡಿದ್ದಾರೆ. ರಸ್ತೆಯಲ್ಲಿ ರಾಶಿ ರಾಶಿ ಗುಂಡಿಗಳು ಬಿದ್ದಿದ್ದು ವರ್ಷಗಳಿಂದ ಗುಂಡಿ ಮುಚ್ಚುವ ಕೆಲಸ GBA ಅಧಿಕಾರಿಗಳು ಮಾಡಿಲ್ಲ. ಈ ಹಿನ್ನಲೆ ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ. ಕುಂಬಳಕಾಯಿ ಇಟ್ಟು ಹೂ ಪೂಜೆ ಮಾಡಿ ಗುಂಡಿಗೆ ಪೂಜೆ ಮಾಡಿ ಪ್ರೊಟೆಸ್ಟ್ ಮಾಡಲಾಗಿದೆ.