ದಾಂಡೇಲಿ: ಶಿಕ್ಷಕಿ ಹಾಗೂ ಕವಯಿತ್ರಿ ಪದ್ಮಶ್ರೀ ಎಸ್. ಜೈನ್ ಅವರಿಗೆ ರಾಜ್ಯಮಟ್ಟದ ಕಾವ್ಯ ಕೇಸರಿ ಪ್ರಶಸ್ತಿ
ದಾಂಡೇಲಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬೆಂಗಳೂರು ಹಾಗೂ ಸಾಹಿತ್ಯ ಸೌರಭ ಫೌಂಡೇಶನ್ ಒಡಗೋಲ ಇವರ ಸಹಯೋಗದಲ್ಲಿ ಕೊಡ ಮಾಡುವ ರಾಜ್ಯ ಮಟ್ಟದ ಕಾವ್ಯ ಕೇಸರಿ ಪ್ರಶಸ್ತಿಗೆ ನಗರದ ಶಿಕ್ಷಕಿ ಹಾಗೂ ಕವಯಿತ್ರಿ ಪದ್ಮಶ್ರೀ ಎಸ್.ಜೈನ್ ಅವರು ಭಾಜನರಾಗಿದ್ದಾರೆ. ಈ ಬಗ್ಗೆ ಬುಧವಾರ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಕನ್ನಡದ ತೇರು ಎಳೆಯೋಣ ಬಾರ ಅಭಿಯಾನದ ರಾಜ್ಯಮಟ್ಟದ ಕಾವ್ಯಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪದ್ಮಶ್ರೀ ಎಸ್ ಜೈನ್ ಅವರಿಗೆ ಗೌರವಿಸಿ ಈ ಪ್ರಶಸ್ತಿ ಪತ್ರವನ್ನು ನೀಡಲಾಗಿದೆ.