ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಪೂರ್ವ ಪಾಮ್ ಬೀಚ್ ವಸತಿ ಸಮುಚ್ಚಯ ಹತ್ತಿರದ ಏಲುಸ್ ರಸ್ತೆಯ ಎರಡು ಬದಿ ಸೇರಿದಂತೆ 12 ಕಿ.ಮೀ ಉದ್ದದ ರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಪೂರ್ವ ನಗರ ಪಾಲಿಕೆ ಅಪರ ಆಯುಕ್ತರು ಲೋಖಂಡೆ ಸ್ನೇಹಲ್ ಸುಧಾಕರ್ ರವರ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ 1:30 ರ ಸುಮಾರಿಗೆ ಯಶಸ್ವಿಯಾಗಿ ನಡೆಸಲಾಯಿತು. ಸಾಮೂಹಿಕ ತೀವ್ರ ಸ್ವಚ್ಛತಾ ಕಾರ್ಯದಲ್ಲಿ, ರಸ್ತೆಯ ಎರಡೂ ಬದಿಗಳು ಮತ್ತು ಮಿಡಿಯನ್ನ ತೀವ್ರ ಸ್ವಚ್ಛತೆಯನ್ನು ನಡೆಸಲಾಯಿತು. ಸಿಲ್ಟ್, ಕಸ, ಡೆಬ್ರಿಸ್ ತೆರವುಗೊಳಿಸಲಾಯಿತು. ಹಳೆಯ ನಿರುಪಯೋಗಿ ವಸ್ತುಗಳಾದ ಸೋಫಾ,ಬೆಡ್, ಕಾಮೋಡ್ ವಿಲೇವಾರಿ ಮಾಡಲಾಯಿತು.