ಬೆಂಗಳೂರು ದಕ್ಷಿಣ: ಡೆವಿಲ್ ಗೆಲುವಿಗೆ ಅಭಿಮಾನಿಗಳು ಮಾಡಿದ್ದೇನು?! ಸಿಲಿಕಾನ್ ಸಿಟಿ ಥಿಯೇಟರ್ ಅಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ತಯಾರಿ
ಡೆವಿಲ್ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಗೆ ಸಜ್ಜಾಗಿದೆ. ಈ ವೇಳೆ JP ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ತಯಾರಿ ಮಾಡುತ್ತಿದೆ. ಡಿ.11 ಕ್ಕೆ ಐದು ಶೋಗಳಲ್ಲಿ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಡಿ.12 ಕ್ಕೆ ಸಿದ್ದೇಶ್ವರ ಚಿತ್ರಮಂದಿರದಲ್ಲಿ ದರ್ಶನ್ ಫ್ಯಾನ್ಸ್ ಗಳಿಗೆ ಪಂಕ್ತಿ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ.