ಮಳವಳ್ಳಿ : ಆರ್ಥಿಕವಾಗಿ ಸಬಲೀ ಕರಣ ಉದ್ದೇಶದಿಂದ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ಗುಂಪು ಚಟುವಟಿಕೆಯಲ್ಲಿ ಮೀನು ಸಾಕಾಣಿಕೆ ನಡೆಸಲು ಆದ್ಯತೆ ನೀಡ ಲಾಗುತ್ತಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದ ಶಾಸಕ ಪಿ. ಎಂ. ನರೇದ್ರಸ್ವಾಮಿ ತಿಳಿಸಿದ್ದಾರೆ, ತಾಲೂಕಿನ ದೊಡ್ಡಬೂವಳ್ಳಿ ಗ್ರಾಮದ ದೊಡ್ಡಕೆರೆಗೆ ಮತ್ಸ್ಯ ಸಂಜೀವಿನಿ ಯೋಜನೆಯಡಿ ಸಂಜೀವಿನಿ, ಸರಸ್ವತಿ ಮಹಿಳಾ ಸ್ವ-ಸಹಾಯ ಗುಂಪಿನ ಮಹಿಳೆ ಯರಿಗೆ ಗುಂಪು ಚಟುವಟಿಕೆ ಮಾಡುವ ಉದ್ದೇಶಕ್ಕಾಗಿ ಕೆರೆಗಳಿಗೆ ಮಿನು ಮರಿ ಬಿಡುವ ಕಾರ್ಯಕ್ರಮ ವನ್ನು ಸೋಮವಾರ ಸಾಯಂಕಾಲ 5.30 ರ ಸಮಯದಲ್ಲಿ ಅವರು ಉದ್ಘಾಟಿಸಿ ಮಾತನಾಡಿದರು,