ಕಲಬುರಗಿಯ ಎಂ.ಬಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಹಾಗೂ ಬೆಂಕಿ ಹಚ್ಚಿದ ಪ್ರಕರಣ ದಾಖಲಾಗಿದೆ. ಬಡೇಪೂರ ಕಾಲೋನಿಯಲ್ಲಿ ಬಾಡಿಗೆ ಮನೆಗೆ ವಾಸವಾಗಿರುವ ಲಕ್ಷ್ಮಿ ಎಂಬುವರು ತಮ್ಮ ಅಕ್ಕ ಮಲ್ಲಮ್ಮ ಮತ್ತು ಅವಳ ಗಂಡ ಮಲ್ಲಪ್ಪ ವಿರುದ್ಧ ದೂರು ನೀಡಿದ್ದಾರೆ. ಅಕ್ಟೋಬರ್ 21ರಂದು ಮನೆಯಲ್ಲಿ ಯಾರು ಇಲ್ಲದಿರುವಾಗ ದಿನಬಳಕೆಯ ವಸ್ತುಗಳನ್ನು ಕಳವು ಮಾಡಿ ನಂತರ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲಿಗೆ ಆಕಸ್ಮಿಕವೆಂದು ಶಂಕಿಸಲಾಗಿತ್ತು. ಈಗ ಅನುಮಾನಾಸ್ಪದವಾಗಿ ಪರಿಣಮಿಸಿದ ಹಿನ್ನಲೆ ಲಕ್ಷ್ಮಿ ಅವರು ಸ್ವತಾ ಅಕ್ಕ ಬಾವನ ವಿರುದ್ಧ ಎಂ.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಆರಂಭಿಸಲಾಗಿದೆ ಎಂದು ಗುರುವಾರ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ.