ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರ ಜನುನದಿನ ನಗರದ ಗವಿಸಿದ್ದೇಶ್ವರ ಮಠದಿಂದ ಬೈಕ್ ರ್ಯಾಲಿ ಯಶಸ್ವಿ
Koppal, Koppal | Sep 16, 2025 ಪ್ರಧಾನಿ ನರೇಂದ್ರ ಮೋದಿ ಅವರ ಜನುನದಿನ ನಿಮಿತ್ತ ಇಂದು ಕೊಪ್ಪಳ ನಗರದ ಗವಿಸಿದ್ದೇಶ್ವರ ಮಠದಿಂದ ಬೈಕ್ ರ್ಯಾಲಿ ಮಾಡುವ ಮೂಲಕ ಕೇಂದ್ರ ಸರ್ಕಾರದ ಯೋಜನೆ ಮತ್ತು ನಾಳೆ ನಡೆಯುವ ರಕ್ತದಾನ ಶಿಬಿರದ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಸೆಪ್ಟೆಂಬರ್ 16 ರಂದು ಸಂಜೆ 6-00 ಗಂಟೆಗೆ ಗವಿಮಠದಿಂದ ಆರಂಭವಾದ ಬೈಕ್ ರ್ಯಾಲಿಯನ್ನು ಬಿಜೆಪಿ ಪಕ್ಷದ ಕೊಪ್ಪಳ ನಗರ ಮಂಡಲದ ನೇತೃತ್ವದಲ್ಲಿ ನಡೆಯಿತು. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನ ನಿಮಿತ್ತ ಸೇವಾ ಪಾಕ್ಷಿಕ ಕಾರ್ಯಕ್ರಮ ನಡೆಯಲಿದೆ ಎಂದು ಕೊಪ್ಪಳ ಜಿಲ್ಲೆಯ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸುನೀಲ ಹೆಸುರರು ಹೇಳಿದರು. ಬೈಕ್ ರ್ಯಾಲಿಯು ಬಸವೇಶ್ವರ ಸರ್ಕಲ್ ವರೆಗೆ ನಡೆಯಿತು.