ಬಾಗಲಕೋಟೆ ನಗರದಲ್ಲಿ ಮಂಗಳೂರು ಡೀಡ್ಸ್ ಸಂಸ್ಥೆ ಮಂಗಳೂರು,ಸಖಿ ಒನ್ ಸ್ಟಾಪ್ ಸೆಂಟರ್,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ – ಬಾಗಲಕೋಟೆ, ಮಕ್ಕಳ ಸಹಾಯವಾಣಿ ಹಾಗೂ ಆಶಾ ಕಾರ್ಯಕರ್ತೆಯರು,ಪೊಲೀಸ್ ಇಲಾಖೆ ಸಹಯೋಗದೊಂದಿಗೆ, ಮಹಿಳೆಯರು ಮತ್ತು ಮಕ್ಕಳಿಗಾಗಿ ಇರುವ ನ್ಯಾಯ ವ್ಯವಸ್ಥೆಗಳ ಕುರಿತು ಸಮಾಲೋಚನಾ ಕಾರ್ಯಕ್ರಮ ಹಮ್ಮಿಕೊಂಡು, ಮಹಿಳೆಯರ ಹಕ್ಕುಗಳು, ರಕ್ಷಣಾ ಕ್ರಮಗಳು, ಕಾನೂನು ನೆರವು ಹಾಗೂ ಮಕ್ಕಳಿಗಾಗಿ ಲಭ್ಯವಿರುವ ಸೇವೆಗಳ ಬಗ್ಗೆ ಕಾನೂನು ಅರಿವು ಮೂಡಿಸಿ, ಸುರಕ್ಷತೆ, ನ್ಯಾಯ ಸಹಾಯ, ಬೆಂಬಲ ವ್ಯವಸ್ಥೆಗಳು ಮತ್ತು ತುರ್ತು ಸೇವೆಗಳ ಕುರಿತು ಮಾಹಿತಿ ನೀಡಲಾಯಿತು.