ಪರಿಸರ ರಕ್ಷಣೆಯತ್ತ ಡಿ ಕೆ ಶಿವಕುಮಾರ್ ಮುನ್ನಡೆಸಿದ ಮತ್ತೊಂದು ಮಹತ್ವದ ಹೆಜ್ಜೆ! ಸೋಮವಾರ ಬೆಂಗಳೂರಿನ ಕನ್ನಹಳ್ಳಿ ಗ್ರಾಮದಲ್ಲಿ ಬಹುನಿರೀಕ್ಷಿತ ಘನ ತ್ಯಾಜ್ಯ ನಿರ್ವಹಣಾ ಘಟಕ ಹಂತ–1 ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಅಧಿಕೃತ ಚಾಲನೆ ನೀಡಲಾಯಿತು.ಈ ಘಟಕದ ನಿರ್ಮಾಣದ ಮೂಲಕ, ನಗರದಲ್ಲಿ ಕಸದ ವಿಲೇವಾರಿ ಪ್ರಕ್ರಿಯೆ ಇನ್ನಷ್ಟು ವ್ಯವಸ್ಥಿತ, ವೈಜ್ಞಾನಿಕ ಮತ್ತು ಸುಗಮವಾಗಲಿದೆ. ಈಗಾಗಲೇ 33 ಪ್ಯಾಕೇಜ್ಗಳಿಗೆ ನ್ಯಾಯಾಲಯದ ಅನುಮೋದನೆ ದೊರೆತಿದ್ದು, ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಸ್ವಚ್ಛತೆಗಾಗಿ ಪ್ರಗತಿ ದೃಢಗೊಳ್ಳುತ್ತಿದೆ.