ಕೊಳ್ಳೇಗಾಲ: ಶಾಗ್ಯ ಗ್ರಾಮದಲ್ಲಿ ಸಂತ್ವ ಹಣದಿಂದ ರಸ್ತೆ ದುರಸ್ತಿ ಪಡಿಸಿದ ಗ್ರಾಮಸ್ಥರು
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ಗ್ರಾಮಸ್ಥರು ಸ್ವಂತ ಹಣದಿಂದ ಮಣ್ಣು ಹಾಕಿಸಿ ರಸ್ತೆಯನ್ನು ದುರಸ್ತಿ ಪಡಿಸಿದರು. ಶಾಗ್ಯ ಗ್ರಾಮದಿಂದ ಗಾಣಿಗ ಮಂಗಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ಸಾಕಷ್ಟು ಬಾರಿ ಶಾಗ್ಯ ಗ್ರಾಮ ಪಂಚಾಯತಿಯವರಿಗೆ ತಿಳಿಸಿದರು. ರಸ್ತೆ ದುರಸ್ತಿ ಪಡಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಬೇಸತ್ತ ಗ್ರಾಮಸ್ಥರೇ ಸ್ವಂತ ಹಣದಿಂದ ರಸ್ತೆ ದುರಸ್ತಿ ಪಡಿಸಿದರು.