ಕುಂದಗೋಳ ಪಟ್ಟಣದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಮೆರವಣಿಗೆಗೆ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಮತ್ತು ಶ್ರೀಮತಿ ಗಾಯತ್ರಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶರು, ಭಾರತವು ವಿವಿಧ ಭಾಷೆ, ಸಂಸ್ಕೃತಿಗಳ ಸಂಗಮವಾಗಿದ್ದು, ಎಲ್ಲರೂ ಒಂದೇ ಎಂಬ ಸಮಾನತೆಯನ್ನು ಸಾರುವ ಸಂವಿಧಾನ ರಚನೆಯಾಗಿ 76 ವರ್ಷಗಳಾಗಿವೆ. ಸಂವಿಧಾನದಡಿಯಲ್ಲಿ ಕಾರ್ಯ ನಿರ್ವಹಿಸಲು ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು. ಮೆರವಣಿಗೆಯು ತಹಶೀಲ್ದಾರ ಕಚೇರಿಯಿಂದ ಸವಾಯಿ ಗಂಧರ್ವ ಭವನದವರೆಗೆ ನಡೆಯಿತು.