ಬೆಂಗಳೂರು ಉತ್ತರ: ಭಾರತದ ಅತ್ಯಂತ ಅಸಮರ್ಥ ಗೃಹ ಸಚಿವ ಅಮಿತ್ ಶಾ: ನಗರದಲ್ಲಿ ಪ್ರಿಯಾಂಕ ಖರ್ಗೆ
ದೆಹಲಿಯ ಕೆಂಪುಕೋಟೆ ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 2:15 ರ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸ್ವತಂತ್ರ ಭಾರತದಲ್ಲಿ ಅತ್ಯಂತ ಅಸಮರ್ಥ ಗೃಹ ಸಚಿವ ಯಾರಾದ್ರೂ ಇದ್ರೆ ಅದು ಅಮಿತ್ ಶಾ ಅವರು. ಇನ್ನು ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕು ? ಗೃಹ ಸಚಿವರಾಗಿ ಚುನಾವಣೆ ವೇದಿಕೆ ಮೇಲೆ ಹೋಗಿ ಬಾಂಗ್ಲಾ ದೇಶದವರು ಬರ್ತಿದ್ದಾರೆ ಅಂತ ಮಾತನಾಡುತ್ತಾರೆ. ಇದಕ್ಕೆ ಜವಾಬ್ದಾರಿ ಯಾರು ಇದಕ್ಕೆ ವಿರೋಧ ಪಕ್ಷದವರು ಜವಾಬ್ದಾರಿ ಆಗ್ತಾರಾ..? ಇವರಿಗೆ ಹೊಣೆಗಾರಿಕೆ ಇಲ್ಲವಾ ? ಇವರು ಅಭಿನವ ಸರ್ದಾರ್ ಅಂತ ಹೇಳಿಕೊಳ್ಳುತ್ತಾರೆ. 56 ಇಂಚಿನ ಎದೆಗಾರಿಕೆ ಅಂತ ಹೇಳಿಕೊಳ್ಳುತ್ತಾರೆ. ಇನ್ನು ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕು ಎಂದು ಪ್ರಶ್ನೆ ಮಾಡಿದರು.