ಕಲಘಟಗಿ: ಇಂದು ಮುಂಜಾನೆ ಹಳಿಯಾಳಕ್ಕೆ ಸಾಗುವ ರಸ್ತೆಯ ಪತ್ರಿಗಿಡದ ಕ್ರಾಸ್ ಬಳಿ ಚಿರತೆಯೊಂದು ಕಾಣಿಸಿಕೊಂಡಿದೆ. ಇದು ದಿನನಿತ್ಯ ನೂರಾರು ವಾಹನಗಳು ಮತ್ತು ಜನರು ಸಂಚರಿಸುವ ರಸ್ತೆಯಾಗಿದ್ದು, ಚಿರತೆಯ ಉಪಟಳದಿಂದ ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಭಯದ ವಾತಾವರಣ ಸೃಷ್ಟಿಯಾಗಿದೆ. ವಾಹನ ಸವಾರರು ಚಿರತೆ ರಸ್ತೆ ದಾಟುವುದನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.