ಲಕ್ಷ್ಮೇಶ್ವರ: ಆಸಕ್ತಿಯಿಂದ ಹೈನುಗಾರಿಕೆ ಮಾಡಿದರೆ ಲಾಭದಾಯಕ- ಡಾ.ಸುಬ್ರಹ್ಮಣ್ಯ ಹೆಗಡೆ ಜಾಜಿಮನೆ
ಯಲ್ಲಾಪುರ: ಹೈನುಗಾರಿಕೆ ದೊಡ್ಡ ಲಾಭದ ಉದ್ಯೋಗವಲ್ಲದಿರಬಹುದು; ಆದರೆ ಅದನ್ನು ತಿಳಿದು ಮಾಡಿದರೆ ನಷ್ಟದ ಕೆಲಸವಂತೂ ಅಲ್ಲ. ದನಗಳಿಂದ ಬರುವ ಸಗಣಿಯೂ ನಮ್ಮ ಬದುಕಿಗೆ ಆಸರೆ ಯಾಗುತ್ತದೆ. ಹಾಲಂತೂ ನಿತ್ಯ ನಮಗೆ ಒದಗಿ ಬರುವ ಆದಾಯವಾಗಿದೆ. ಹೀಗಿರುವಾಗ ನೀವು ಪಶುಸಂಗೋಪನೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಬಾಳೆಗದ್ದೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಆಯೋಜಿಸಲಾಗಿದ್ದ ಜಾನುವಾರು ಸಾಕಣೆ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿವೃತ್ತ ಪಶು ವೈದ್ಯಾಧಿಕಾರಿಗಳಾದ ಡಾ. ಸುಬ್ರಹ್ಮಣ್ಯ ಹೆಗಡೆ ಜಾಜಿಮನೆ ಹೇಳಿದರು.