ಕಲಬುರಗಿ : ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ ಅಜಯಸಿಂಗ್ ತವರು ಜೇವರ್ಗಿ ತಾಲೂಕಿನ ಶಿವಪುರ, ನಾರಾಯಣಪುರ, ನಂದಿಹಳ್ಳಿ ಸೇರಿ ಹಲವೆಡೆ ರಸ್ತೆ ನಿರ್ಮಾಣ ಹೆಸರಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಅಂತಾ ಸಾಮಾಜಿಕ ಹೋರಾಟಗಾರ ಮಹಾಂತಗೌಡ ನಂದಿಹಳ್ಳಿ ಆರೋಪಿಸಿದ್ದಾರೆ.. ನ23 ರಂದು ಮಧ್ಯಾನ 12 ಗಂಟೆಗೆ ಗ್ರಾಮದಲ್ಲಿ ಮಾತನಾಡಿದ ಅವರು, ಕೆಲವು ಗ್ರಾಮಗಳಲ್ಲಿ PRD ಇಲಾಖೆ ರಸ್ತೆ ನಿರ್ಮಾಣ ಮಾಡಿದ್ರೆ ಅದೇ ರಸ್ತೆ ಹೆಸರಲ್ಲಿ ಅದರದ್ದೆ ಫೋಟೊ ಬಳಸಿ PWD, KRIDL ಇಲಾಖೆ ಭೋಗಸ್ ಬಿಲ್ ಸೃಷ್ಟಿಸಿ 6/7 ಕೋಟಿ ಭ್ರಷ್ಟಾಚಾರ ಎಸಗಿದ್ದು, ತನಿಖೆ ನಡೆಸಬೇಕೆಂದು ಮಹಾಂತಗೌಡ ಆಗ್ರಹಿಸಿದ್ದಾರೆ.