ಚಾಮರಾಜನಗರ ತಾಲೂಕಿನ ಬಸವನಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮಾದಿಗ ಸಮುದಾಯ ಬಸವನಪುರ ರಾಜಶೇಖರ್ ನೇತೃತ್ವದಲ್ಲಿ ಡೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಸಂಘದಲ್ಲಿ ವೀರಶೈವ ಸಮುದಾಯ, ಕುರುಬರ ಸಮುದಾಯದಿಂದ ಅಧ್ಯಕ್ಷರಾಗಿದ್ದರು. ಈ ಬಾರಿ ಮಾದಿಗ ಸಮುದಾಯ ಕ್ಕೆ ಅಧ್ಯಕ್ಷ ಸ್ಥಾನ ಕೊಡುವುದಾಗಿ ಮಾತುಕತೆ ಆಗಿತು. ಆದರೆ ಇಂದು ಡೇರಿಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಮಾದಿಗ ಸಮುದಾಯ ನಿರ್ದೇಶಕರಾದ ಬಿ.ಸಿ.ಮಹಾದೇವಸ್ವಾಮಿ, ಮಹದೇವಸ್ವಾಮಿ, ಕುಮಾರಿ, ಎಲ್ .ಮಹಾದೇವಸ್ವಾಮಿ ಅವರನ್ನು ಕರೆಯದೆ ಆಯ್ಕೆ ಮಾಡಿದ್ದಾರೆ ಎಂದರು