ಯಲ್ಲಾಪುರ: ಸೆ19ರಂದು ಏಕತಾ ಸಮಾವೇಶ,ಜಿಲ್ಲೆಯಿಂದ ಸಾವಿರಾರು ಜನರು ಭಾಗಿ,ಪಟ್ಟಣದಲ್ಲಿ ಜಿಲ್ಲಾಧ್ಯಕ್ಷ ಅಲ್ಲಯ್ಯನವರಮಠ ಮಾಹಿತಿ
ಯಲ್ಲಾಪುರ : ಸೆ.19 ರಂದು ಮಧ್ಯಾಹ್ನ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ರಾಜ್ಯ ಮಟ್ಟದ ಏಕತಾ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಅತ್ಯಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಕೋರಿದರು. ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಸಮಾವೇಶದಲ್ಲಿ 1000 ಮಠಾಧೀಶರು, ಪಂಚ ಮಠಾಧೀಶರು, ಸಮಾಜದ ಹಿರಿಯರು ಪಾಲ್ಗೊಳ್ಳಲಿದ್ದಾರೆ ಎಂದರು.