ಕೊಳ್ಳೇಗಾಲದ ಶ್ರೀ ನಾಗಸಾಯಿ ಮಂದಿರದಲ್ಲಿ ಶಿವ ದೀಪೋತ್ಸವವು ಸಡಗರದಿಂದ ಗುರುವಾರ ಸಂಜೆ ಜರುಗಿತು. ಕೊಳ್ಳೇಗಾಲ ಪಟ್ಟಣದಲ್ಲಿರುವ ನಾಗಸಾಯಿ ದೇವಾಲಯದಲ್ಲಿ ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಸಹಸ್ರಾರು ದೀಪಗಳನ್ನು ಭಕ್ತರು ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನ ಅರ್ಚಕ ಮಧುಸೂದನ್ ಸಾಯಿ ಮೂರ್ತಿಗೆ ವಿವಿಧ ಅಭಿಶೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು. ಮೊದಲಿಗೆ ತುಪ್ಪದ ದೀಪಗಳನ್ನು ಹಚ್ಚಿದ ನಂತರ ಮಹಾದೀಪವನ್ನು ಬೆಳಗಲಾಯಿತು. ಜಿಲ್ಲೆಯ ನಾನಾಭಾಗದಿಂದ ಭಕ್ತರು ಬಂದಿದ್ದರು.