ಕಲಬುರಗಿ : ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಧರಿಸಿರೋ ದುಬಾರಿ ಬೆಲೆ ವಾಚ್ ವಿವಾದಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ಡಿ6 ರಂದು ಮಧ್ಯಾನ 12 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ನಾಳೆ ನಾನು 70 ಲಕ್ಷ ರೂ ಕೊಟ್ಟು ವಾಚ್ ಖರೀಧಿ ಮಾಡಿ ಹಾಕ್ತಿನಿ.. ಅದಕ್ಕೆ ಐಟಿ ರಿಟರ್ನ್ ಕೊಟ್ಟರೆ ಆಯ್ತಲ್ಲ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.. ಇನ್ನೂ ಮೋದಿ ಅವರು ಹತ್ತು ಲಕ್ಷದ ಸೂಟ್ ಹಾಕ್ತಾರೆ.. ಎಲ್ಲಿಂದ ಬಂತು. ಐಟಿ ಅವರ ಕೈಲಿ ಇದೆಯಲ್ವ.. ರಸೀದಿ ಕೇಳಲಿ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.