ಚಳ್ಳಕೆರೆ: ತಾಲ್ಲೂಕಿನ ಪೆತ್ತಮ್ಮನವರಹಟ್ಟಿ ಬಳಿ ಕಳಪೆ ಗುಣಮಟ್ಟದ ಔಷಧಿ ಸಿಂಪರಣೆ; ಒಣಗುತ್ತಿರುವ ಟೊಮ್ಯಾಟೊ ಬೆಳೆ,ರೈತ ಆತಂಕ
ಚಳ್ಳಕೆರೆ: ಕಳಪೆ ಗುಣಮಟ್ಟದ ಔಷಧಿಯಿಂದ ಸಿಂಪರಣೆ ಮಾಡಿದ ಟೊಮ್ಯಾಟೊ ಬೆಳೆ ಒಣಗಿದ ಘಟನೆಯೊಂದು ತಾಲ್ಲೂಕಿನ ಪೆತ್ತಮ್ಮನರಹಟ್ಟಿ ಪಾಲಯ್ಯ ಜಮೀನಿನನಲ್ಲಿ ಬುಧವಾರ ನಡೆದಿದೆ. ಬಾಲೇನಹಳ್ಳಿ ಗೇಟ್ ಬಳಿರುವ ಶ್ರೀಚಾಮುಂಡೇಶ್ವರಿ ಎಂಟರ್ ಪ್ರೈಸಸ್ನಲ್ಲಿ ಉತ್ತಮ ಇಳುವರಿ, ರೋಗ ನಿವಾರ್ಹಣೆಗೆ ಟೋಮೋಟೊ ಬೆಳೆ ಔಷಧಿ ನೀಡುವಂತೆ ಮಾಲೀಕನಿಗೆ ಕೇಳಿದಾಗ 2650 ರೂ ಬೆಳೆ ಬಾಳುವ ಔಷಧಿ ನೀಡಿದ್ದಾರೆ. ಖರೀದಿ ಮಾಡಿ ತಂದು ರೈತ ಪಾಲಯ್ಯ ಅವರು ಟೊಮೋಟೊ ಬೆಳೆ ಸಿಂಪರಣೆ ಮಾಡಿದ್ದಾರೆ. ಆದರೆ ಟೋಮೋಟೊ ಬೆಳೆ ಸಂಪೂರ್ಣವಾಗಿ ಒಣಗಲು ಆರಂಭಿಸಿರುವುದರಿಂದ ರೈತ ಪಾಲಯ್ಯ ಆತಂಕಗೊಂಡಿದ್ದಾರೆ.