ಅಲುಗಮೂಲೆ ಗ್ರಾಮದಲ್ಲಿ ಭಕ್ತರ ನೆರಳು: ಹೊಸ್ತಿಲ ಹುಣ್ಣಿಮೆ ಪರಿಷೆ ಜಾತ್ರೆ ವಿಜೃಂಭಣೆ ಹನೂರು ತಾಲೂಕಿನ ಅಲುಗಮೂಲೆ ಗ್ರಾಮದಲ್ಲಿ ಪ್ರತಿವರ್ಷ ಆಚರಿಸಲಾಗುವ ಹೊಸ್ತಿಲ ಹುಣ್ಣಿಮೆ ಪರಿಷೆ ಜಾತ್ರೆ ಈ ಬಾರಿಯೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. ಜಾತ್ರೆಯ ಸಂಪ್ರದಾಯದಂತೆ, ದೇವಾಲಯದ ಪ್ರಧಾನ ಆರ್ಚಕರು ಗ್ರಾಮದಲ್ಲಿನ ಎಲ್ಲಾ ಹಸುಗಳಿಂದ ಸ್ವಯಂ ಕರೆಸಿದ ಹಾಲನ್ನು ಹೊತ್ತು, ದಟ್ಟ ಕಾನನದ ಮಧ್ಯದಲ್ಲಿರುವ ಮುಂಬೆಟ್ಟದ ದೇವಾಲಯಕ್ಕೆ ವಾದ್ಯಮೇಳಗಳೊಂದಿಗೆ ತೆರಳಿ, ಆ ಹಾಲಿನ ನೈವೇದ್ಯ ಹಾಗೂ ವಿವಿಧ ಅಭಿಷೇಕಗಳನ್ನು ನೆರವೇರಿಸಿದರು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.