ಕಲಬುರಗಿ: ನಕಲಿ ಜಿಪಿಎಸ್ ಪೋಟೋ ಬಳಸಿ ಹಣ ಲೂಟಿ: ನಗರದಲ್ಲಿ ಕುಮಸಿ ಪಿಡಿಒ ವಿರುದ್ಧ ಯುವ ಸೈನ್ಯದ ಆರೋಪ
ಕುಮಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವ ವಸತಿ ಯೋಜನೆಯ 2024–25ರ ಹಣದಲ್ಲಿ ಪಿಡಿಒ ಅಧಿಕಾರಿ ನಕಲಿ ಜಿಪಿಎಸ್ ಫೋಟೋಗಳನ್ನು ಬಳಸಿ ಲೂಟಿ ಮಾಡಿದ್ದಾರೆ ಎಂದು ಭಾರತೀಯ ಯುವ ಸೈನ್ಯ ಆರೋಪಿಸಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಿದ ಪಿಡಿಒ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ವಜಾ ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಈ ಕುರಿತು ಶುಕ್ರವಾರ ನಾಲ್ಕು ಗಂಟೆಗೆ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ದಾಖಲೆಗಳ ಸಮೇತ ಮನವಿ ಸಲ್ಲಿಸಲಾಗಿದ್ದು, ಕೂಡಲೇ ಅಮಾನತು ಕ್ರಮ ಕೈಗೊಳ್ಳದಿದ್ದರೆ ತಾಲೂಕು ಪಂಚಾಯತಿ ಕಚೇರಿ ಮುಂದೆ ಬೃಹತ್ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಚಿಂಚನ್ಸೂರ್ ಎಚ್ಚರಿಸಿದ್ದಾರೆ