ನಗರದ ವಿಶ್ವರಾಧ್ಯ ಕಲ್ಯಾಣ ಮಂಟಪದಲ್ಲಿ ನಡೆದ ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಗಲಾಟೆ ಉಂಟಾಗಿರುವ ಕುರಿತು ಸಬ್ ಅರ್ಬನ್ ಠಾಣೆಗೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ರಿಟರ್ನಿಂಗ್ ಅಧಿಕಾರಿ ಪ್ರಮೋದ ಕರ್ಣಮಂ ಅವರ ದೂರಿನ ಪ್ರಕಾರ, ಮತಗಟ್ಟೆ ಸಂಖ್ಯೆ–01 ನಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ 50ಕ್ಕೂ ಹೆಚ್ಚು ಮಂದಿ ಗುಂಪಾಗಿ ನುಗ್ಗಿ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಮತಪತ್ರಗಳನ್ನು ಹರಡಿ ತೂರಾಡಿ, ಮತಪೆಟ್ಟಿಗೆಯ ಶೀಲ ಒಡೆಯಲು ಪ್ರಯತ್ನಿಸಿದ್ದಾರೆ. ನಂತರ ಉಳಿದ 5 ಮತಗಟ್ಟೆಗಳಲ್ಲಿಯೂ ಗಲಾಟೆ ಚಿಮ್ಮಿದೆ ಎಂದು ವಿವರಿಸಿದ್ದಾರೆ. ಸದ್ಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂ