ರಬಕವಿ-ಬನಹಟ್ಟಿ: ನಗರದಲ್ಲಿ ಮಾವಾ ತಯಾರಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ,ವಲಸೆ ಮಾವಾ ಮಾರಾಟಗಾರರಿಂದ ಕಾಲೇಜು ಹುಡುಗರೇ ಟಾರ್ಗೆಟ್
ಮಾವಾ ಎನ್ನುವ ಮಾದಕ ವಸ್ತು ತಯಾರಿಕೆ ಅಡ್ಡೆ ಮೇಲೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸರು ದಾಳಿ ನಡೆಸಿದ್ದಾರೆ.ಬನಹಟ್ಟಿ ನಗರದ ಅಶೋಕ ನಗರದಲ್ಲಿರುವ ಮಾವಾ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಮಾವಾ ತಯಾರಿಸಲು ಬಳಸುತ್ತಿದ್ದ 35 ಕೆ.ಜಿ ತೂಕದ ತಂಬಾಕು ಸೇರಿ ಕಚ್ಚಾ ವಸ್ತುಗಳನ್ನ ಸೀಜ್ ಮಾಡಿದ್ದಾರೆ.ಒಂದೇ ತಿಂಗಳಲ್ಲಿ ಜಮಖಂಡಿ ಭಾಗದಲ್ಲಿ 25 ಕ್ಕೂ ಪ್ರಕರಣಗಳು ದಾಖಲಾಗಿವೆ. ನೆರೆ ಜಿಲ್ಲೆ ಹಾಗೂ ಹೊರ ಭಾಗಗಳಿಂದ ಆಗಮಿಸುವ ವಲಸೆ ಮಾವಾ ಮಾರಾಟಗಾರರ ಹಾವಳಿ ಹೆಚ್ಚಾಗಿದ್ದು ಕಾಲೇಜು ಹುಡುಗರನ್ನ ಟಾರ್ಗೆಟ್ ಮಾಡುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.