ರಾಷ್ಟ್ರೀಯ ಕೇಂದ್ರ ಸಂಸ್ಕೃತಿ ವಿಶ್ವವಿದ್ಯಾಲಯದಿಂದ ನಗರದ ಸರಕಾರಿ ಕಾಲೇಜಿಗೆ ಸಂಸ್ಕೃತಿ ಕಲಿಕಾ ಕೇಂದ್ರವನ್ನು ಮಂಜೂರು ಮಾಡಲಾಗಿದೆ ಎಂದು ಸರಕಾರಿ ಕಾಲೇಜು ಪ್ರಾಂಶುಪಾಲರಾದ ಡಾ.ವೆಂಕಣ್ಣ ಯಾದವ ಹೇಳಿದರು. ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರತಿವರ್ಷ ನಮ್ಮ ಕಾಲೇಜಿನಲ್ಲಿ ಫಲಿತಾಂಶ ಹೆಚ್ಚಳವಾ ಗುತ್ತಿದೆ. ಇದನ್ನು ಮನಗಂಡು ಕೇಂದ್ರ ಸಂಸ್ಕೃತಿಕ ವಿಶ್ವವಿದ್ಯಾಲಯ ಸಂಸ್ಕೃತಿಕ ಕಲಿಕಾ ಕೇಂದ್ರವನ್ನು ಮಂಜೂರು ಮಾಡಲಾಗಿದೆ. ಸಂಸ್ಕೃತ ಭಾಷ, ಜ್ಞಾನ ಮತ್ತು ಸಂಸ್ಕೃತಿಯ ಅಪ್ರತಿಮ ನಿಧಿ, ಈ ಭಾಷೆಯಲ್ಲಿ ಸಂರಕ್ಷಿಸಲಾಗಿರುವ ಸಂಪನ್ಮೂಲಗಳು ಅಪಾರ ಮತ್ತು ವೈವಿಧ್ಯಮಯವಾಗಿವೆ ಎಂದರು.