ಶ್ರೀರಂಗಪಟ್ಟಣ : ಹನುಮ ಜಯಂತಿ ಅಂಗವಾಗಿ ಶ್ರೀ ರಂಗ ಪಟ್ಟಣದಲ್ಲಿ ಹನುಮ ಮಾಲಾ ಧಾರಿಗಳಿಂದ ಬೃಹತ್ ಸಂಕೀರ್ತನ ಯಾತ್ರೆ ಜರುಗಿತು. ಪಟ್ಟಣದ ನಿಮಿಷಾಂಭ ದೇಗುಲದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮಲ್ಲಿ ದೀಪ ಬೆಳಗಿಸಿ ಆಂಜನೇಯನಿಗೆ ಪುಷ್ಪಾರ್ಚನೆ ಮಾಡಿ ವೇದಿಕ ಕಾರ್ಯಕ್ರಮ ಉಧ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಲಾಧಾರಿಗಳಿಂದ ಮೂಡಲಬಾಗಿಲು ಆಂಜನೇಯ ದೇಗುಲ ಪುನರ್ ಪ್ರತಿಷ್ಠಾಪನೆಯ ಪ್ರತಿಜ್ಞೆ ಕೈಗೊಳ್ಳಲಾಯಿತು ಸಭೆಯಲ್ಲಿ ಹಿಂದೂ ಮುಖಂಡ ರಾದ ಡಾ.ಭಾನುಪ್ರಕಾಶ್ ಶರ್ಮಾ, ಲೋಹಿತ್ ಅರಸು, ಕೇಶವ ಮೂರ್ತಿ, ರಂಗಸ್ವಾಮಿ ಪ್ರಾಂತ್ಯ ಸಂಚಾಲಕರು, ಸೃಜನ್ ಗೌಡ, ಚಂದನ್ ಗೌಡ, ಬಾಲರಾಜು, ಮತ್ತಿತರರು ಪಾಲ್ಗೊಂಡಿದ್ದರು.