ಚಾಮರಾಜನಗರ: ಪಾಕಿಸ್ತಾನದವರು ರಾಗಾ ಪರ ಮಾತಾಡ್ತಾರೆ ಅಂದ್ರೆ ಏನರ್ಥ; ನಗರದಲ್ಲಿ ಮಾಜಿ ಸಚಿವ ಮಹೇಶ್ ವಾಗ್ದಾಳಿ
ರಾಹುಲ್ ಗಾಂಧಿ ಅವರನ್ನು ಪಾಕ್ ಮಾಜಿ ಕ್ರಿಕೆಟಿಗ ಅಫ್ರಿಧಿ ಹೊಗಳುತ್ತಾರೆ ಅಂದ್ರೆ ಏನರ್ಥ, ಪಾಕಿಸ್ತಾನಕ್ಕು ಕಾಂಗ್ರೆಸ್ ಪಾರ್ಟಿಗೂ ಒಳ ಒಪ್ಪಂದ ಇರ್ಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಆಕ್ರೋಶ ಹೊರಹಾಕಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಇವರ ಒಳ ಒಪ್ಪಂದವನ್ನ ಜನ ಅರ್ಥ ಮಾಡಿ ಕೊಳ್ಳದಷ್ಟು ಮೂರ್ಖರಲ್ಲ, ಪಾಕಿಸ್ತಾನಕ್ಕೂ ಕಾಂಗ್ರೆಸ್ ಪಕ್ಷಕ್ಕು ಒಳ ಒಪ್ಪಂದ ಇರ್ಲೇ ಬೇಕು, ಕಾಂಗ್ರೆಸ್ ನವರು ಪಾಕಿಸ್ತಾನ ಪರವಾಗಿ ಮಾತನಾಡಿದ್ರೆ ಇಲ್ಲಿ ಓಟ್ ಬರುತ್ತಲ್ಲ, ಪಾಕಿಸ್ತಾನದಲ್ಲಿರುವಂತ ವಿದೇಶಿಗರು ಭಾರತದಲ್ಲಿರುವಂತ ಪಾಕಿಸ್ತಾನ ಪರ ಇರುವ ಶಕ್ತಿಗಳು ಒಂದಾಗಿದ್ದಾರೆ ಎಂದು ಗೊತ್ತಾಗುತ್ತದೆ ಎಂದರು.