ಚಾಮರಾಜನಗರ: ಅರಳವಾಡಿ ಬಳಿ ಮತ್ತೇ ಭಯಾನಕ ಕಾಡಾನೆ ಗುಂಪು ಪ್ರತ್ಯಕ್ಷ, ರೈತರಲ್ಲಿ ಆತಂಕ, ವೀಡಿಯೋ ವೈರಲ್
ಚಾಮರಾಜನಗರದ ಗಡಿಭಾಗವಾದ ಅರಳವಾಡಿ ಹಾಗೂ ಬಿಸಲವಾಡಿ ಬಳಿ ಮತ್ತೇ ಕಾಡಾನೆ ಗುಂಪು ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗುತ್ತಿದೆ. ಕರ್ನಾಟಕ- ತಮಿಳುನಾಡು ಗಡಿಯಲ್ಲಿ ಸುಮಾರು 40-50 ಕಾಡಾನೆಗಳು ಇರುವ ಗುಂಪು ದಿನ ನಿತ್ಯ ಜನ ವಸತಿ ಪ್ರದೇಶಕ್ಕೆ ಬಂದು ರೈತರು ಬೆಳೆದ ಬೆಳೆಗಳನ್ನು ತುಳಿದು ನಾಶ ಮಾಡುತ್ತಿದೆ. ರೈತರು ಆತಂಕ ಹೆಚ್ಚಾಗಿದೆ.