ನವಲಗುಂದ: ಡಿಸೆಂಬರ್ 7 ರಂದು ರೈತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗೆ ಅವಕಾಶವಿಲ್ಲ : ಪಟ್ಟಣದಲ್ಲಿ ಎಸ್ ಪಿ ಗುಂಜನ್ ಆರ್ಯ ಹೇಳಿಕೆ
ನವಲಗುಂದ ಪಟ್ಟಣಕ್ಕೆ ಡಿಸೆಂಬರ್ 7 ರಂದು ಶಾಸಕ ಎನ್.ಎಚ್ ಕೋನರೆಡ್ಡಿ ಅವರು ಆಯೋಜಿಸಿರುವ ಸರ್ವಧರ್ಮ ಸಾಮೂಹಿಕ ವಿವಾಹಕ್ಕೆ ಬರುವ ಸಿಎಂ ಸಿದ್ದರಾಮಯ್ಯ ಅವರಿಗೆ ರೈತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗೆ ಅವಕಾಶ ನೀಡಿರುವುದಿಲ್ಲ ಎಂದು ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹೇಳಿದರು.