ಬೆಂಗಳೂರು ಉತ್ತರ: ಕೆಸೆಟ್: ಪ್ರಮಾಣಪತ್ರ ಪಡೆದ ಬಸ್ ಕಂಡಕ್ಟರ್, ಮಾರ್ಷಲ್
ಕೆಇಎಯು ಶನಿವಾರ ಕೆ-ಸೆಟ್ ಪ್ರಮಾಣಪತ್ರ ವಿತರಿಸಿದೆ. ಬಿಎಂಟಿಸಿ ಕಂಡಕ್ಟರ್ ಜಯಮ್ಮ ಹಾಗೂ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕದ ಮಾರ್ಷಲ್ ಅರವಿಂದ ಅವರು ಪ್ರಮಾಣಪತ್ರ ಪಡೆದವರಲ್ಲಿ ಸೇರಿದ್ದಾರೆ. ಕೆಇಎ ನಡೆಸಿದ ಪರೀಕ್ಷೆಯಿಂದ ಕಂಡಕ್ಟರ್ ಉದ್ಯೋಗ ಪಡೆದಿದ್ದ ಜಯಮ್ಮ, ಈಗ ಕೆ-ಸೆಟ್ ಆಗಿದ್ದು, ಸಹಾಯಕ ಪ್ರಾಧ್ಯಾಪಕರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅರವಿಂದ ಅವರು ತ್ಯಾಜ್ಯ ವಿಲೇವಾರಿ ಘಟಕದ ಬಳಿಯೂ ಓದುತ್ತಾ ಕಷ್ಟಪಟ್ಟು ಕೆ-ಸೆಟ್ ಉತ್ತೀರ್ಣರಾಗಿದ್ದು, ತಮ್ಮ ಆಸೆ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.