ಚಾಮರಾಜನಗರದ ತಾಲೂಕಿನ ಬಿಸಲವಾಡಿ ಹಾಗೂ ಗಡಿ ಹಂಚಿಕೊಂಡಿರುವ ಅರಳವಾಡಿಯಲ್ಲಿರುವ ತಮಿಳುನಾಡು ಕರ್ನಾಟಕ ಗಡಿಯಲ್ಲಿ ಪದೇ ಪದೇ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಗ್ರಾಮಸ್ಥರಲ್ಲಿ ಹಾಗೂ ರೈತರಲ್ಲಿ ಭಯ ಉಂಟು ಮಾಡುತ್ತಿದೆ. ಇಂದು ಸಹ 40 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಜಮೀನಿಗಳಿಗೆ ಬೆಳೆಗಳನ್ನು ನಾಶ ಮಾಡಿದೆ. ಕಾಡಾನೆಗಳ ಹಾವಳಿಯಿಂದ ರೈತರು ಬೇಸತ್ತು ಹೋಗಿದ್ದಾರೆ.