ಬೆಂಗಳೂರು ಕೆ.ಆರ್ ಪುರಂ ಪೊಲೀಸರ ಕಾರ್ಯಾಚರಣೆ ಹಿನ್ನೆಲೆ ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ 70 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ ಹಾಗೂ 1.5 ಕೆಜಿ ಸಿಲ್ವರ್ ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಇಸ್ರಾರ್ ಬಂಧಿತ ಆರೋಪಿಯಾಗಿದ್ದು, ತಡರಾತ್ರಿ ಮನೆಗಳವು ಮಾಡ್ತಿದ್ದ ಆರೋಪಿ, ಬಟ್ಟೆಗಳನ್ನ ಬದಲಾಯಿಸಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ. ಅಫೆನ್ಸ್ ಮಾಡಿದ ಮೇಲೆ ಬಟ್ಟೆ ಹಾಗೂ ಬೈಕ್ ನ ನಂಬರ್ ಪ್ಲೇಟ್ ಚೇಂಜ್ ಮಾಡ್ತಿದ್ದ. ಕಳೆದ ಮೂರು ವರ್ಷದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಆರೋಪಿಯನ್ನ, ಸದ್ಯ ಪೊಲೀಸರು ಜೈಲಿಗಟ್ಟಿದ್ದಾರೆ.