ಜಮಖಂಡಿ: ಸನಾಳ ಗ್ರಾಮದಲ್ಲಿ ನೇಣಿಗೆ ಶರಣಾದ ಬಿ.ಎಂ.ಟಿ.ಸಿ ನೌಕರ, ಕಾರಣ ಏನು ಗೊತ್ತಾ?
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸನಾಳ ಗ್ರಾಮದ ಮನೆಯೊಂದರಲ್ಲಿ ಬಿ.ಎಮ್.ಟಿ.ಸಿ ನೌಕರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ತುಂಗಳ ಗ್ರಾಮದ ಮಲಕಪ್ಪ ರಾಮಪ್ಪ ನ್ಯಾಮಗೌಡ ( ೪೯) ಎಂದು ತಿಳಿದು ಬಂದಿದೆ.ಮಲಕಪ್ಪ ಬೆಂಗಳೂರಿನಲ್ಲಿ ಬಿ.ಎಮ್.ಟಿ.ಸಿಯಲ್ಲಿ ಚಾಲಕ ಕಮ್ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ ಬೆಂಗಳೂರಿನ ತಮ್ಮ ಸಹೋದ್ಯೋಗಿ ದಂಪತಿಗಳು ಹಣದ ವಿಷಯಕ್ಕಾಗಿ ಕಿರಕುಳ ಮಾಡುತಿದ್ದರು ಎನ್ನಲಾಗಿದೆ, ಕಿರುಕುಳ ತಾಳಲಾರದೆ ಮನನೊಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ತಿಳಿದು ಬಂದಿ